ಇಯನ್ ಮುರ್ಡಾಕ್ (28 ಏಪ್ರಿಲ್ 1973 – 28 ಡಿಸೆಂಬರ್ 2015) ಅಮೇರಿಕದ ತಂತ್ರಾಂಶ ಎಂಜಿನಿಯರ್‌ ಆಗಿದ್ದು, ಡೆಬಿಯನ್ ಯೋಜನೆ ಮತ್ತು ಪ್ರೊಜೆನಿ ಲಿನಕ್ಸ್ ಸಿಸ್ಟಂಸ್ ಎಂಬ ವಾಣಿಜ್ಯ ಸಂಸ್ಥೆಯ ಸ್ಥಾಪಕರೆಂದೇ ಪ್ರಸಿದ್ಧರಾಗಿದ್ದರು. == ಜೀವನ ಮತ್ತು ವೃತ್ತಿ == ಇಯನ್ ಆಶ್ಲೆ ಮುರ್ಡಾಕ್ ಕಾನ್‌ಸ್ಟಾಂಜ್, ಪಶ್ಚಿಮ ಜರ್ಮನಿಯಲ್ಲಿ 28 ಏಪ್ರಿಲ್ 1973 ರಂದು ಹುಟ್ಟಿದರು. ಅವರು ಡೆಬಿಯನ್ ಮ್ಯಾನಿಫೆಸ್ಟೋವನ್ನು ಪುರ್ಡ್ಯು ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಯಾಗಿದ್ದಾಗ ಬರೆದರು, ಇಲ್ಲಿ ಅವರು ತಮ್ಮ ಕಂಪ್ಯೂಟರ್ ವಿಜ್ಞಾನದ ಸ್ನಾತಕೋತ್ತರ ಪದವಿಯನ್ನು ೧೯೯೬ರಲ್ಲಿ ಪಡೆದರು. ಅವರು ಡೆಬಿಯನ್‌ಗೆ ತಮ್ಮ ಗೆಳತಿ ಡೆಬ್ರಾ ಲಿನ್ ಮತ್ತು ತನ್ನ ಹೆಸರನ್ನು ಜೋಡಿಸಿ ಹೆಸರಿಟ್ಟಿದ್ದರು (ಡೆಬ್ ಮತ್ತು ಇಯನ್). ಇವರಿಬ್ಬರು ನಂತರ ಮದುವೆಯಾಗಿ (೧೯೯೩ ಮತ್ತು ೧೯೯೬ರ ನಡುವೆ), 10 ಆಗಸ್ಟ್ 2007 ರಂದು ವಿಚ್ಛೇಧನಕ್ಕೆ ಅರ್ಜಿ ಹಾಕಿದರು, ಮತ್ತು ಅವರ ವಿಚ್ಛೇಧನವನ್ನು ಜನವರಿ ೨೦೦೮ರಲ್ಲಿ ನೀಡಲಾಯಿತು. ಜನವರಿ ೨೦೦೬ರಲ್ಲಿ, ಮುರ್ಡಾಕ್ ಫ್ರೀ ಸ್ಟಾಂಡರ್ಡ್ಸ್ ಗ್ರೂಪ್‌ನ ಮುಖ್ಯ ತಂತ್ರಜ್ಞಾನ ಮುಖ್ಯಸ್ಥರಾಗಿ ಆಯ್ಕೆಗೊಂಡರು ಮತ್ತು ಅವರನ್ನು ಲಿನಕ್ಸ್ ಸ್ಟಾಂಡರ್ಡ್ ಬೇಸ್ ಕಾರ್ಯತಂಡದ ಮುಖ್ಯಸ್ಥರನ್ನಾಗಿಯೂ ಚುನಾಯಿಸಲಾಯಿತು. ಅವರು ಫ್ರೀ ಸ್ಟಾಂಡರ್ಡ್ಸ್ ಗ್ರೂಪ್‌ ಮತ್ತು ಓಪನ್ ಸೋರ್ಸ್ ಡೆವೆಲಪ್ಮೆಂಟ್ ಲ್ಯಾಬ್ಸ್ ವಿಲೀನಗೊಂಡಾಗ ಸೃಷ್ಟಿಸಲಾದ ಲಿನಕ್ಸ್ ಫೌಂಡೇಷನ್‌ನ ಸಿಟಿಓ ಆಗಿ ಮುಂದುವರೆದರು. ಮುರ್ಡಾಕ್ ಲಿನಕ್ಸ್ ಫೌಂಡೇಷನ್ ಅನ್ನು ಬಿಟ್ಟು ಸನ್ ಮೈಕ್ರೋಸಿಸ್ಟಮ್ಸ್ ಅನ್ನು ಮಾರ್ಚ್ ೨೦೦೭ರಲ್ಲಿ ಪ್ರಾಜೆಕ್ಟ್ ಇಂಡಿಯಾನ ಮುಂದಾಳತ್ವ ವಹಿಸಲು ಸೇರಿದರು, ಇದನ್ನು ಅವರು " " ಎಂದು ವಿವರಿಸುತ್ತಾರೆ, ಸಂಪೂರ್ಣ ಬಿಡುಗಡೆಯನ್ನು ಮತ್ತು ಸಲಕರಣೆಗಳೊಂದಿಗೆ ಮತ್ತು ನೆಟ್ವರ್ಕ್-ಆಧಾರಿತ ಪ್ಯಾಕೇಜ್ ಮ್ಯಾನೇಜ್ಮೆಂಟ್ ಸಿಸ್ಟಂಗಳ ಜೊತೆಗೆ ಸೃಷ್ಟಿವುದು ಇದರ ಉದ್ದೇಶವಾಗಿರುತ್ತದೆ. ಮಾರ್ಚ್ ೨೦೦೭ ರಿಂದ ಫೆಬ್ರವರಿ ೨೦೧೦ ರವರೆಗೆ, ಅವರು ಸನ್ ಮೈಕ್ರೋಸಿಸ್ಟಂಸ್‌ನಲ್ಲಿ ಎಮೆರ್ಜಿಂಗ್ ಪ್ಲಾಟ್‌ಫಾರ್ಮ್ಸ್‌ನ ಉಪಾಧ್ಯಕ್ಷರಾಗಿದ್ದರು, ಆರೆಕಲ್‌ನೊಂದಿಗೆ ಕಂಪೆನಿ ವಿಲೀನವಾಗುವವರೆಗೂ ಮತ್ತು ನಂತರ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟರು. ೨೦೧೧ ರಿಂದ ೨೦೧೫ ರ ವರೆಗೆ ಮುರ್ಡಾಕ್ ಇಂಡಿಯಾನಫೋಲೀಸ್‌ನ ಸೇಲ್ಸ್‌ಫೋರ್ಸ್ ಮಾರ್ಕೆಟಿಂಗ್ ಕ್ಲೌಡ್‌ನ ಪ್ಲಾಟ್‌ಫಾರ್ಮ್ ಮತ್ತು ಡೆವೆಲಪರ್ ಸಮುದಾಯದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು . ನವೆಂಬರ್ ೨೦೧೫ರಿಂದ ತನ್ನ ಮರಣದವರೆಗೂ ಮರ್ಡಾಕ್ ಡಾಕರ್, ಇಂಕ್‌ಗಾಗಿ ಕಾರ್ಯನಿರ್ವಹಿಸುತ್ತಿದ್ದರು. ಡಿಸೆಂಬರ್ ೨೮, ೨೦೧೫ ರಂದು ತಿಳಿದ ಇವರ ಮರಣದ ಸುತ್ತಲಿನ ವಿವರಗಳು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಅವರ ಕೊನೆಯ ಟ್ವೀಟ್‌ನಲ್ಲಿ ಆತ್ಮಹತ್ಯೆಯ ಇಂಗಿತವನ್ನೂ, ಮತ್ತು ಪೋಲೀಸರೊಟ್ಟಿಗಿನ ಹಿಂಸಾತ್ಮಕ ಮುಖಾಮುಖಿಗಳ ಬಗ್ಗೆ ತಿಳಿಸಿದ್ದಾರೆ. ಇವರು ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿ, ತಮ್ಮ ವಾಸಸ್ಥಾನದಲ್ಲಿ ಮರಣ ಹೊಂದಿದರು. == ಇದನ್ನೂ ನೋಡಿ == ಡೆಬಿಯನ್ ಯೋಜನೆಯ ನಾಯಕರು == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == "", , 1994. " ( 22:20)" (MP3), ., , 11 2005 " ( 48:04)" (MP3), ., , 4 2006